ಅಬುಲ್ ಖೈರ್, ಆಸಿಮ್ ಖಿಯಾಲ್ ಗೆ ಪ್ರತಿಷ್ಠಿತ ‘ನಜ್ಮೆ ಇಖ್ವಾನ್’ ಗೋಲ್ಡ್ ಮೆಡಲ್

Source: sonews | By Staff Correspondent | Published on 22nd December 2018, 7:05 PM | Coastal News | Don't Miss |

ಭಟ್ಕಳ:  ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ (ರಾಜ್ಯಪಠ್ಯಕ್ರಮ) ಯ ವಿದ್ಯಾರ್ಥಿ ಅಬುಲ್ ಖೈರ್ ಅಬ್ದುಲ್ ಮಜೀದ್ ಬಂಗಾಲಿ ಹಾಗೂ ನ್ಯೂಶಮ್ಸ್ ಸ್ಕೂಲ್(ಐಸಿಎಸ್‍ಇ ಬೋರ್ಡ್)ನ ಆಸಿಮ್ ಅಬ್ದುಲ್ ವದೂದ್ ಖಿಯಾಲ್ 2018-19ನೇ ಸಾಲಿನ ಪ್ರತಿಷ್ಠಿತ ‘ನಜ್ಮೆ ಇಖ್ವಾನ್’ ಗೋಲ್ಡ್ ಮೆಡಲ್ ಗೆ ಬಾಜನರಾಗಿದ್ದಾರೆ.

ಇಲ್ಲಿನ ಹೆಬಳೆ ಪಂಚಾಯತ್ ವ್ಯಾಪ್ತಿಯ ಜಾಮಿಯಾಬಾದ್ ರಸ್ತೆಯಲ್ಲಿನ ಸೈಯ್ಯದ್ ಅಲಿ ಕ್ಯಾಂಪಸ್ ನಲ್ಲಿ ಶನಿವಾರ ಜರಗಿದ 47ನೇ ಶಾಲಾ ವಾರ್ಷೀಕೋತ್ಸವ ಸಮಾರಂಭದಲ್ಲಿ ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರವನ್ನು ಖ್ಯಾತ ವಾಣಿಜೋದ್ಯಮಿ ಶಾಮ್ವೀಲï ಭಲ್ಲಿ ಪ್ರಧಾನಿಸಿದರು.

ನಂತರ ಮಾತನಾಡಿದ ಅವರು ಶಿಕ್ಷಣ ಸಮಾಜದ ಬೆನ್ನಲುಬಾಗಿದ್ದು ಉತ್ತಮ ಹಾಗೂ ಮೌಲ್ಯಯುತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಸದಾ ಪ್ರಯತ್ನಶೀಲರಾಗಬೇಕೆಂದು ಕರೆ ನೀಡಿದರು. 

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಸಂಸ್ಥೇಯ ಉಪಾಧ್ಯಕ್ಷ ಇಂಜಿನೀಯರ್ ನಝೀರ್ ಆಹ್ಮದ್ ಖಾಝಿ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಶಿಕ್ಷಣವು ಮಹತ್ತರ ಭೂಮಿಕೆಯನ್ನು ವಹಿಸುತ್ತದೆ. ವಿದ್ಯಾರ್ಥಿ ಸಮುದಾಯ ನಮಗೆ ಅತ್ಯವಶ್ಯಕವಾಗಿದ್ದು ವಿದ್ಯಾರ್ಥಿಗಳು ತಮ್ಮ ಮೌಲ್ಯವನ್ನು ಅರಿತುಕೊಳ್ಳಬೇಕು, ಶಿಕ್ಷಣ ಎಂಬ ತ್ರಿಕೋನಾಕೃತಿಯಲ್ಲಿ  ಶಿಕ್ಷಕ, ಪಾಲಕ ಹಾಗೂ ವಿದ್ಯಾರ್ಥಿಗಳು ಸಮಾನ ಪಾತ್ರವಹಿಸುತ್ತಾರೆ ಎಂದರು. 

ತರಬಿಯತ್ ಎಜುಕೇಶನ್ ಸೂಸೈಟಿಯ ಫಿನಾನ್ಸ್ ಕಾರ್ಯದರ್ಶಿ ಡಾ.ಒವೇಸ್ ಕ್ವಾಜಾ ರುಕ್ನುದ್ದೀನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಸಲಾಹುದ್ದೀನ್ ಎಸ್.ಕೆ. ಸ್ಕೂಲ್ ಬೋರ್ಡ್ ಚೇರ್ಮನ್ ಕಾದಿರ್ ಮೀರಾ ಪಟೇಲ್, ಪಿಆರ್‍ಒ ಕಾರ್ಯದರ್ಶಿ ಮೌಲಾನ ಅಝೀಝುರ್ರಹ್ಮಾನ್ ನದ್ವಿ ರುಕ್ನುದ್ದೀನ್, ಮೌಲ್ವಿ ಹಾಫೀಝ್ ಅಬ್ದುಲ್ ಗನಿ, ಸೈಯ್ಯದ್ ಶಕೀಲ್ ಎಸ್.ಎಂ. ಸೈಯ್ಯದ್ ಯೂಸೂಫ್ ರೈಯ್ಯಾನ್ ಬರ್ಮಾವರ್, ಬಿಲಾಲ್ ರುಕ್ನುದ್ದೀನ್, ಶಮ್ಸ್ ಹಳೆ ವಿದ್ಯಾರ್ಥಿಗಳ ಸಂಘದ ಮುಹಮ್ಮದ್ ನೂಹ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದು. 

ಶಮ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮುಖ್ಯಾಧ್ಯಾಪಕ ಮುಹಮ್ಮದ್ ರಝಾ ಮಾನ್ವಿ ಸ್ವಾಗತಿ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ ಸಂಸ್ಥೆಯ ವರದಿಯನ್ನು  ದೃಶ್ಯಮಾಧ್ಯಮದ ಮೂಲಕ ಪ್ರಸ್ತುತಪಡಿಸಿದರು. 

ವಿದ್ಯಾರ್ಥಿಗಳಾದ ಅಬುಲ್ ಖೈರ್, ನಾದಿರ್ ಇಕ್ಕೇರಿ ಕಾರ್ಯಕ್ರಮ ನಿರೂಪಿಸಿದರು. 

Read These Next

ನಾಲ್ಕು ತಿಂಗಳಿಂದ ವೇತನವಿಲ್ಲದ ಶಿಕ್ಷಕರು ಕಂಗಾಲು; ಡಿಡಿಪಿಐ ಕಚೇರಿ ಮುಂದೆ ಧರಣಿ-ವೇತನ ಬಿಡುಗಡೆಗೆ ಆಗ್ರಹ

ಕೋಲಾರ: ಜಿಲ್ಲೆಯ ವಿವಿಧ ತಾಲ್ಲೂಕುಗಳ ಪ್ರೌಢಶಾಲಾ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳಿಂದ ಸಂಬಳ ಬಂದಿಲ್ಲ,ಕುಟುಂಬ ನಿರ್ವಹಣೆಗೆ ...