ಅಬುಧಾಬಿ:ಶಾಂತಿ ಪ್ರಕಾಶನ ವತಿಯಿಂದ ಅಬುಧಾಬಿಯಲ್ಲಿ ನಡೆದ ಚಿಂತನ ಕಾರ್ಯಕ್ರಮ

Source: shanti prakashana | By Arshad Koppa | Published on 11th November 2016, 12:55 PM | Gulf News | Special Report | Don't Miss |

ಅಬುಧಾಬಿ, ನ ೧೦: ಶಾರ್ಜಾ ಎಕ್ಸ್ಪೋ ದಲ್ಲಿನ 35 ನೆಯ ಅಂತ ರಾಷ್ಟ್ರೀಯ ಪುಸ್ತಕ ಮೇಳ- (ನವಂಬರ್ 2-2016 ರಿಂದ ನವಂಬರ್ 12 ರವರೆಗಿನ) ಇದರ ಬೃಹತ್ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟಗಳ ಮಳಿಗೆಗಳಲ್ಲಿ ಶಾಂತಿ ಪ್ರಕಾಶನ ಮಂಗಳೂರು ಇದರ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯು ಕಾರ್ಯಾಚರಿಸುತ್ತಿದ್ದು ಇದು ಶಾರ್ಜಾ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಕನ್ನಡ ಭಾಷೆಯಲ್ಲಿನ ಸಾಹಿತ್ಯಕ್ಕೆ ದೊರೆತ ಪ್ರಪ್ರಥಮ ಅವಕಾಶವೂ, ಕನ್ನಡ ಸಾಹಿತ್ಯ ಪ್ರಿಯರಿಗೆ ಸಂಭ್ರಮದ ವಿಚಾರವೂ ಆಗಿರುತ್ತದೆ. ಶಾರ್ಜಾ ಎಕ್ಸ್ಪೋ ದಲ್ಲಿನ ಪುಸ್ತಕ ಮೇಳವನ್ನು ಕಾಣಲು ಬರುತ್ತಿರುವರಲ್ಲಿನ ಕರ್ನಾಟಕದ ಜನತೆಯನ್ನು ಕೈ ಬೀಸಿ ಕರೆಯುತ್ತಿರುವ ಶಾಂತಿ ಪ್ರಕಾಶನವು ಕನ್ನಡಾಭಿಮಾನಿಗಳಿಗೆ ಆಕರ್ಷಣೀಯವಾಗಿದ್ದು, ಈಗಾಗಲೇ ಸಾಕಷ್ಟು ಕನ್ನಡಿಗ ಸಂದರ್ಶಕರು ಹರ್ಷ ವ್ಯಕ್ತಪಡಿಸಿದ್ದಾರೆ.

ವಿದೇಶಿ ನೆಲದ ಅಂತರಾಷ್ಟ್ರೀಯ ಸಾಹಿತ್ಯ ಮೇಳವೊಂದರಲ್ಲಿ ಕನ್ನಡ ಫಲಕಗಳಿಂದ ಸ್ವಾಗತಿಸುವ ಕನ್ನಡದ ಅಕ್ಷರಗಳು, ಕನ್ನಡ ನುಡಿಗಳ ಕರೆಯೋಲೆ ಕನ್ನಡದಲ್ಲೇ ಮಾತನಾಡಿಸುವ ಮಳಿಗೆಯಲ್ಲಿನ ಪ್ರತಿನಿಧಿಗಳಿಂದ ಪುಳಕಿತಗೊಂಡ ಕನ್ನಡ ನಾಡಿನ ಜನರ ಹಲವರಿಂದ ಪ್ರಶಂಶೆಗೆ ಪಾತ್ರವಾದ ಶಾಂತಿ ಮಳಿಗೆಯು ಇನ್ನಷ್ಟು ಕನ್ನಡ ಪುಸ್ತಕಗಳು ಲಭ್ಯವಾಗಿಸುವಂತಹ ಸಲಹೆಗಳನ್ನೊಳಗೊಂಡಂತೆ ಅಭೂತಪೂರ್ವ ಸ್ವಾಗತವನ್ನು ಪಡೆಯುತ್ತಿದೆ.

ಇವೆಲ್ಲಾ ಬೆಳವಣಿಗೆಗೆ ಪೂರ್ವಭಾವಿಯಾಗಿ ತಮ್ಮ ಪ್ರಕಾಶನವು ಶಾರ್ಜಾ ಎಕ್ಸ್ಪೋ ಕೇಂದ್ರದಲ್ಲಿ ಆರಂಭಗೊಂಡ ಮರುದಿನದಂದು ಅಂದರೆ ಕಳೆದ 03/11/2016 ನೇ ಗುರುವಾರ ರಾತ್ರಿ 8 ರ ಬಳಿಕ ಶಾಂತಿ ಪ್ರಕಾಶನಲಾಯದ ಸಾಹಿತ್ಯಾಸಕ್ತರ ವತಿಯಿಂದ “ಶಾಂತಿಗಾಗಿ ಸಾಹಿತ್ಯ” ಎಂಬ ಧ್ಯೇಯದಡಿಯಲ್ಲಿ ಇದರ ಪ್ರಚಾರ ಸಭೆಯೊಂದನ್ನು ಅಬುಧಾಬಿಯಲ್ಲಿ ಜರಗಿಸಲಾಯಿತು.

 

ಅಬ್ದುಲ್ಲತ್ತೀಫ್ ಫಲಾಹಿ ನೀರ್ಕಜೆ ವಿಟ್ಲ ರವರ ಕುರ್ ಆನ್ ಕಿರಾಅತ್ ಮತ್ತು ಆದರ ಕನ್ನಡಾನುವಾದದೊಂದಿಗೆ ಅರಂಭಗೊಂಡ ಈ ಸಭೆಯಲ್ಲಿ ಮಾತನಾಡಿದ, ಯು.ಎ.ಇ ಸಂದರ್ಶನದಲ್ಲಿರುವ ಮಸ್ಜಿದುಲ್ ಹುದಾ ತೊಕ್ಕೊಟ್ಟು ಇದರ ಖತೀಬರೂ ಹಾಗೂ ಶಾಂತಿ ಪ್ರಕಾಶನದ ವ್ಯವಸ್ಥಾಪಕರೂ ಆದ ಜನಾಬ್ ಮಹಮದ್ ಕುಂಞ್ಞಿ ರವರು, ಪ್ರವಾದಿ ಜೀವನವನ್ನು ಕಲಿತು ಉತ್ತಮ ಮುಸ್ಲಿಮನಾಗಿ ಬಾಳಲು ಶಾಂತಿಯ ಸಾಹಿತ್ಯಗಳು ಪ್ರೇರೇಪಿಸಿವೆ ಅಂತೆಯೇ ಮನುಕುಲದ ಪ್ರವಾದಿಯಾಗಿರುವ ಪ್ರವಾದಿ ಮಹಮ್ಮದ್ ಸ.ಆ.ರ ಜೀವನದಿಂದ ಇಂದಿನ ಸಕಲ ಪ್ರಚಲಿತ ಸಮಸ್ಯೆಗಳಿಗೂ ಪರಿಹಾರೋಪಾಯಗಳಿವೆ. ಪ್ರವಾದಿಯ ಜೀವನಕ್ರಮ ನಮಗೆ ಮಾರ್ಗದರ್ಶಕವಾಗಬೇಕು. ಕೇವಲ ಬೋಧನೆಗಳಿಗೆ ಮಾತ್ರ ಸೀಮಿತವಾಗದ ಅವರ ಸರಳ ಸಾತ್ವಿಕ ಜೀವನದಿಂದ ಮಾನವರೆಲ್ಲರಿಗೂ ಅಗತ್ಯವಾದ ಹಲವು ಪಾಠಗಳಿವೆ. ಆದರೆ ಸಮುದಾಯವು ಅವರನ್ನು ಒಬ್ಬ ಸಂತನನ್ನಾಗಿ ರೂಪಿಸಿದೆ. ಆದ್ದರಿಂದ ಪ್ರವಾದಿಯವರ ಧಾರ್ಮಿಕ ಬೋಧನೆಗಳಿಂದಾಚೆಗಿರುವ ಅವರ ಸಾಮಾಜಿಕ, ಆರ್ಥಿಕ ರಾಜಕೀಯ, ನೈತಿಕತೆಗಳ ನಿಲುವುಗಳನ್ನು ಸಾಹಿತ್ಯಗಳನ್ನು ಅಭ್ಯಸಿಸುವುದರ ಮೂಲಕ ಅರಿತುಕೊಳ್ಳಬೇಕಾಗಿರುವುದು ಇಂದಿನ ಅಗತ್ಯವಾಗಿದೆ. ಅವರ ಚಿಂತನೆಗಳು ಸಾರ್ವಕಾಲಿಕವಾಗಿರುವ ಹಲವಾರು ಬಿಕ್ಕಟ್ಟುಗಳಿಗೆ ಶಮನಕಾರಿಯಾಗಿದೆಯೆಂದು ಹೇಳಿದರು.

ಭಾಷಣದ ನಂತರ ಸಭಿಕರಿಂದ ಪ್ರಶ್ನೆಗಳನ್ನು ಕೋರಲಾಗಿ ನೆರೆದ ಜನಗಳಿಂದ ಮುಂದಿಡಲ್ಪಟ್ಟ ಸವಾಲುಗಳಾದ ಪ್ರಸಕ್ತ ಭಾರತದಲ್ಲಿ ಮುಸ್ಲಿಮರ ಸಮಸ್ಯೆಗಳು, ಸಮಾನ ನಾಗರಿಕ ಸಂಹಿತೆಯ ಕೂಗು ತ್ರಿವಳಿ ತಲಾಖ್ ವಿವಾದ ಹಾಗೂ ಸಮುದಾಯದಲ್ಲಿನ ಆರ್ಥಿಕ ದುರವಸ್ಥೆಯನ್ನು ಝಕಾತ್ ಪದ್ದತಿಯನ್ನು ಸಾಮೂಹಿಕ ವಿತರಣೆಯಾಗಿ ಸುಧಾರಿಸುವ ಮೂಲಕ ಹೇಗೆ ನಿವಾರಿಸಬಹುದು ಎಂಬಿತ್ಯಾದಿಯಾಗಿ ಸಮರ್ಪಕವಾದ ಉತ್ತರಗಳನ್ನು ನೀಡಿದರು.

ಯು.ಎ.ಇ ಯ ವಿವಿಧ ಸಂಸ್ಥಾನಗಳಿಂದ ಆಗಮಿಸಿದ್ದ ಸಾಹಿತ್ಯಾಸಕ್ತರನ್ನೊಳಗೊಂಡ ಈ ಸಭೆಯನ್ನು ನಿರೂಪಣೆಗೈದ ಸಲೀಂ ಸೂಫಿ ಬಣಕಲ್ ರವರು ಆರಂಭದಲ್ಲಿ ಅತಿಥಿಗಳನ್ನು ಸಭಿಕರಿಗೆ ಪರಿಚಯಿಸಿ ಸ್ವಾಗತಿಸಿದರು ಹಾಗೂ ಕೊನೆಯಲ್ಲಿ ಧನ್ಯವಾದವಿತ್ತರು

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...