ಅಬುಧಾಬಿ :ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಅಬುದಾಬಿ ಯುನಿಟ್ ಅಧ್ಯಕ್ಷರಾಗಿ ಜನಾಬ್.ಇಕ್ಬಾಲ್ ಕುಂದಾಪುರ ಆಯ್ಕೆ.

Source: yusuf arlapadavu | By Arshad Koppa | Published on 14th March 2017, 8:29 AM | Gulf News |

ಅಬುಧಾಬಿ : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ಇದರ ಅಧೀನ ಘಟಕವಾದ ಅಬುದಾಬಿ  ಇದರ 18 ನೇ ವಾರ್ಷಿಕ ಮಹಾ ಸಭೆಯು ಸಯ್ಯದ್ ತ್ವಾಹ ಭಾಪಕಿ ತಂಘಳ್ ರವರ ನೇತೃತ್ವ ಹಾಗೂ ಗೌರವಾಧ್ಯಕ್ಷರಾದ ಜನಾಬ್. ಹಾಜಿ . ಹೈದರಾಲಿ ಉಜಿರೆ ರವರ ಉಪಸ್ಥಿತಿಯಲ್ಲಿ ಯುನಿಟ್ ಅಧ್ಯಕ್ಷರಾಗಿದ್ದ ಜನಾಬ್.ಹಾಜಿ. ಮಹಮ್ಮದ್ ಕುಂಞ್ಞಿ ಅಡ್ಕ ರವರ  ಅಧ್ಯಕ್ಷತೆಯಲ್ಲಿ  ಜನಾಬ್. ಇಕ್ಬಾಲ್ ಕುಂದಾಪುರ ರವರ ನಿವಾಸದಲ್ಲಿ ನಡೆಯಿತು. ಕಾರ್ಯಕ್ರಮವು ಸಯ್ಯದ್ ತ್ವಾಹ ಭಾಪಕಿ ತಂಘಳ್ ರವರ ದುವಾ ದೊಂದಿಗೆ ಪ್ರಾರಂಭ ಗೊಂಡು ಯುನಿಟ್ ಜೊತೆ ಕಾರ್ಯದರ್ಶಿ ಜನಾಬ್.ಹಸೈನಾರ್ ಅಮಾನಿ ರವರು ಸ್ವಾಗತಿಸಿ ಡಿ.ಕೆ.ಎಸ್.ಸಿ ಯ ಅಜೀವ ಸದಸ್ಯರೂ  ಕೆ.ಸಿ.ಎಫ್. ಯು.ಎ.ಇ ನ್ಯಾಷನಲ್ ಕಮಿಟಿ ಅಧ್ಯಕ್ಷರೂ ಆದ ಜನಾಬ್.ಅಬ್ದುಲ್ ಹಮೀದ್ ಸಆದಿ ಈಶ್ವರಮಂಗಲ ರವರು ಡಿ.ಕೆ.ಎಸ್.ಸಿ ಎಂಬ ಸಂಘಟನೆ ಯು ಗಲ್ಫ್ ರಾಷ್ಟ್ರಗಳಲ್ಲಿ  ಸಂಘಟಿಸಿ ಇದರ ಅದೀನದಲ್ಲಿ  ಬ್ರಹತ್ತಾದ ಧಾರ್ಮಿಕ ಹಾಗು ಲೌಕಿಕ ವಿದ್ಯಾರ್ಜನೆಯನ್ನು ನೀಡುತ್ತಿರುವ ನೆರೆಯ ಕೇರಳ ರಾಜ್ಯ ವಾಗಲಿ ಇನ್ನಿತರ ರಾಜ್ಯದಲ್ಲಾಗಲಿ ಇಂದಿನವರೆಗೆ ಕಾಣದ ಅನಿವಾಸಿ ಕನ್ನಡಿಗರ ಸುನ್ನತ್ ಜಮಾಹತ್ ನ ಏಕೈಕ ಸಂಘಟನೆಯಾಗಿದ್ದು ಇದಕ್ಕೆ ಇಲ್ಲರೂ ಸಹಕರಿಸುವಂತೆ ವಿನಂತಿಸುವುದರೊಂದಿಗೆ  ಸಭೆಯನ್ನು ಉದ್ಘಾಟಿಸಿದರು.  ಪ್ರಧಾನ ಕಾರ್ಯದರ್ಶಿ  ಜನಾಬ್. ಇಕ್ಬಾಲ್ ಕುಂದಾಪುರ ರವರು ವಾರ್ಷಿಕ ವರದಿ ಹಾಗೂ  ಲೆಕ್ಕ ಪತ್ರ ವನ್ನು  ಮಂಡಿಸಿದರು.  ಸಭೆಯಲ್ಲಿ ಯುನಿಟ್ ಉಸ್ತುವಾರಿಯಾಗಿ ಆಗಮಿಸಿದ ಜನಾಬ್. ಹಾಜಿ. ಅಬ್ದುಲ್ಲಾ ಬೀಜಾಡಿ ರವರು  ಚುನಾವಣಾದಿಕಾರಿಯಾಗಿ 2017-18 ರ ಸಾಲಿನ ನೂತನ ಸಮಿತಿಯನ್ನು ರಚಿಸಿದರು. ಡಿ.ಕೆ.ಎಸ್.ಸಿ ಯು.ಎ.ಇ.ರಾಷ್ಟೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಎಸ್.ಯೂಸುಫ್ ಅರ್ಲಪದವು ರವರು ನೂತನ ಕಮಿಟಿ ಗೆ ಶುಭ ಹಾರೈಸಿದರು. ಸಭೆಯಲ್ಲಿ  ರಾಷ್ಟೀಯ ಸಮಿತಿ ಉಪಾದ್ಯಕ್ಷರಾದ ಜನಾಬ್.ಹಾಜಿ.ಹಸನಬ್ಬ ಕೊಲ್ನಾಡು, ಹಿರಿಯ ಸಸದಸ್ಯರಾದ ಜನಾಬ್.ಅಬ್ದುಲ್ ಖಾದರ್ ಕಾರ್ಕಳ  ರಾಷ್ಟೀಯ ಸಮಿತಿಯ ಜನಾಬ್.ಇ.ಕೆ.ಇಬ್ರಾಹಿಂ ಕಿನ್ಯ, ಜನಾಬ್.ಅಬ್ದುಲ್ ರಜಾಕ್ ಮುಟ್ಟಿಕಲ್,  ಅಜ್ಮಾನ್ ಯುನಿಟ್ ನ ನಜೀರ್ ಕಣ್ಣಂಗಾರ್, ಇಬ್ರಾಹಿಂ ಬ್ರೈಟ್ ಮಾರ್ಬಲ್ , ಕೆ.ಎಚ್.ಸಖಾಫಿ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಕೊನೆಯಲ್ಲಿ  ಸಯ್ಯದ್ ತ್ವಾಹ ಭಾಪಕಿ ತಂಘಳ್ ರವರ ನೇತೃತ್ವದಲ್ಲಿ ಅಸ್ಮಾಹುಲ್ ಉಸ್ನಾ  ಮಜ್ಲಿಸ್ ನಡೆಯಿತು.

2017 - 18 ರ ಸಾಲಿನ ನೂತನ ಸಮಿತಿ

ಗೌರವಾಧ್ಯಕ್ಷರು: ಜನಾಬ್. ಹಾಜಿ. ಹೈದರಾಲಿ ಉಜಿರೆ

ಸಲಹೆಗಾರರು : ಜನಾಬ್.ಅಬ್ದುಲ್ ಹಮೀದ್ ಸಆದಿ ಈಶ್ವರಮಂಗಲ, ಜನಾಬ್.ಹಾಜಿ. ಇಬ್ರಾಹಿಂ ಬ್ರೈಟ್ ಮಾರ್ಬಲ್,  ಜನಾಬ್.ಹಾಜಿ.ಶೇಖ್ ಬಾವ ಮಂಗಳೂರು, ಜನಾಬ್. ಹಾಜಿ.ಅಬ್ದುಲ್ಲಾ ಮದುಮೂಲೆ

 

ಅಧ್ಯಕ್ಷರು: ಜನಾಬ್.ಇಕ್ಬಾಲ್ ಕುಂದಾಪುರ

ಉಪಾಧ್ಯಕ್ಷರು: ಜನಾಬ್.ಅಬ್ದುಲ್ ಖಾದರ್ ಕಾರ್ಕಳ, ಜನಾಬ್.ಡಾ. ಡಾ. ಸಿಬಘತ್ ಅಲಿ ಖಾನ್ ಮೈಸೂರು , ಜನಾಬ್.ಕೆ.ಎಚ್.ಸಖಾಫಿ

 

ಪ್ರಧಾನ ಕಾರ್ಯದರ್ಶಿ: ಜನಾಬ್: ಹಾಜಿ.ಹಸನ್ ಬಾಳೆಹೊನ್ನೂರ್

ಜೊತೆ ಕಾರ್ಯದರ್ಶಿ: ಜನಾಬ್: ಹಸೈನಾರ್ ಅಮಾನಿ, ಜನಾಬ್.ಇಬ್ರಾಹಿಂ ಬಪ್ಪಳಿಗೆ , ಜನಾಬ್.ಅಶ್ರಫ್ ಸರಳೀಕಟ್ಟೆ 

 

ಕೋಶಾದಿಕಾರಿ : ಜನಾಬ್. ಹಾಜಿ. ಮಹಮ್ಮದ್ ಕುಂಞ್ಞಿ ಅಡ್ಕ

ಲೆಕ್ಕ  ಪರಿದೋಶಕರು: ಜನಾಬ್. ಮಹಮ್ಮದ್ ಕುಂಞ್ಞಿ ಸಖಾಫಿ ಬೈರಿಕಟ್ಟೆ

ಸಂಚಾಲಕರು: ಜನಾಬ್. ಝುಬೇರ್ ಪುತ್ತೂರು, ಜನಾಬ್.ಅಶ್ರಫ್ ನಟ್ಟಿಬೈಲ್ ಉಪ್ಪಿನಂಗಡಿ, ಜನಾಬ್.ಹಮೀದ್ ಮುಸ್ಲಿಯಾರ್, ಜನಾಬ್.ಇಬ್ರಾಹಿಂ ಹಾಜಿ

ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.

Read These Next