ಜ್ವರದಿಂದ ಬಳಲುತ್ತಿರುವ ಮಹಿಳೆ;  ಎಚ್1ಎನ್1 ಶಂಕೆ 

Source: sonews | By Staff Correspondent | Published on 1st November 2018, 12:17 AM | Coastal News | Don't Miss |

ಮುಂಡಗೋಡ: ಪಟ್ಟಣದ ಮಹಿಳೆಯೊಬ್ಬರಿಗೆ ಶಂಕಿತ ಎಚ್1ಎನ್1 ಖಾಯಿಲೆ ಇರುವ ಕುರಿತು ಸಂಶಯ ಮೂಡಿದೆ ಕಳೆದ ಕೆಲದಿನಗಳಿಂದ ಕೆಮ್ಮು, ಜ್ವರದಿಂದ ಬಳಲುತ್ತಿದ್ದು ಮಹಿಳೆ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದ್ದು ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಯವರು ಹುಬ್ಬಳ್ಳಿ ಖಾಸಗಿ ರಕ್ತ ತಪಾಸಣಾ ಕೇಂದ್ರದಲ್ಲಿ ರಕ್ತ ತಪಾಸಣೆ ಮಾಡಿದಾಗ ಎಚ್1ಎನ್1 ಇರುವುದು ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ. 28-10-2018 ರಂದು  ಸರಕಾರಿ ಆಸ್ಪತ್ರೆಗೆ ದಾಖಲಾದ ಮಹಿಳೆ ಅಕ್ಟೋಬರ್ 29 ರಂದು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಎಸ್‍ಡಿಎಂ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎಸ್‍ಡಿಎಮ್ ಆಸ್ಪತ್ರೆಯಲ್ಲಿ ರೋಗಿಯ ಗಂಟಲ ಸ್ರಾವವನ್ನು ಮಣಿಪಾಲಗೆ ಕಳುಹಿಸಿದ್ದಾರೆ. ವರದಿಯು ಡಿಎಚ್‍ಒ ಗೆ ಕಳುಹಿಸಿಕೊಡುತ್ತಾರೆ ಅಲ್ಲಿನ ವರದಿ ಬಂದ ನಂತರವೇ ನಿಖರವಾದ ಮಾಹಿತಿ ಲಭ್ಯವಾಗಲಿದೆ. ಖಾಸಗಿ ರಕ್ತ ತಪಾಸಣಾ ಕೇಂದ್ರದ ವರದಿಯನ್ನು ನಾವು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ತಾಲೂಕಾ ವೈದ್ಯಾಧಿಕಾರಿ ಪದ್ಮಪ್ರೀಯ ವಾಯ್.ಪವಾರ  ತಿಳಿಸಿದರು

ಜನರಲ್ಲಿ ಜಾಗೃತಿ: ಮುಂಡಗೋಡ ಸರಕಾರಿ ಪ್ರಾಥಮಿಕ ಆರೋಗ್ಯ ಕೆಂದ್ರದವರು ಪಟ್ಟಣ ಆನಂದನಗರದ ದೇವಸ್ಥಾನದಲ್ಲಿ ಸಾರ್ವಜನಿಕರ ಸಭೆ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಅಲ್ಲದೆ ಮನೆ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ವಚ್ಛತೆ ಕುರಿತು ಮಾಹಿತಿ ನೀಡಿದರು.

ಕಳೆದ ತಿಂಗಳು ಸಹ ಕಲಾಲ ಓಣಿಯ ಮಹಿಳೆಯೊಬ್ಬರಿಗೆ ಈ ಖಾಯಿಲೆ ಇರುವುದು ಪತ್ತೆಯಾಗಿತ್ತು ಅವರು ಗುಣಮುಖರಾಗಿದ್ದಾರೆ  ಇದೀಗ ಮತ್ತೊಬ್ಬ ಮಹಿಳೆಗೆ ಶಂಕಿತ ಎಚ್1ಎನ್1ಖಾಯಿಲೆ ಪತ್ತೆಯಾಗಿರುವುದು ಪಟ್ಟಣ ಜನರಲ್ಲಿ ಆತಂಕ ಮೂಡಿಸಿದೆ.
 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...