ಭಾರತ್ ಬಂದ್ ಕರೆಗೆ ಶ್ರೀನಿವಾಸಪುರಲ್ಲಿ ಮಿಶ್ರ ಪ್ರತಿಕ್ರಿಯೆ

Source: sonews | By Staff Correspondent | Published on 10th September 2018, 5:53 PM | State News |

ಶ್ರೀನಿವಾಸಪುರ: ತೈಲ ಬೆಲೆ ಏರಿಕೆಯಾಗಿರುವುದನ್ನು ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳು ನೀಡಿರುವ ಬಂದ್ ಕರೆಗೆ ಶ್ರೀನಿವಾಸಪುರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪಟ್ಟಣದಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿವೆ. ಬೆಳಗ್ಗಿನಿಂದಲೇ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳು, ಕಾರುಗಳು ಹಾಗೂ ಇನ್ನಿತರ ವಾಹನಗಳು ರಸ್ತೆಗಿಳಿಯಲಿಲ್ಲ. ಶಾಲಾ-ಕಾಲೇಜುಗಳಿಗೆ ಮೊದಲೇ ರಜೆ ಸಾರಲಾಗಿತ್ತು. ದ್ವಿಚಕ್ರ ವಾಹನಗಳು ಹಾಗೂ ಕೆಲವೊಂದು ರಿಕ್ಷಾಗಳು ಮಾತ್ರ ಓಡಾಟ ನಡೆಸುತ್ತಿವೆ.  ಪಟ್ಟಣದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು  ಕಾರ್ಯಕರ್ತರು ಮತ್ತು ರೈತಮುಖಂಡರು  ಕಾರ್ಯಕರ್ತರು ಮೆರವಣಿಗೆ ನಡೆಸಿದರು ಮೆರವಣಿಗೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಲಾಯಿತು.

ಈ ಸಂದರ್ಭನ ತೆರೆದಿಟ್ಟಿದ್ದ ಕೆಲವೊಂದು ಅಂಗಡಿಗಳನ್ನು ಮುಚ್ಚುವಂತೆ ಮೆರವಣಿಗೆಯಲ್ಲಿ ಭಾಗವಹಿಸಿದವರು ಮನವಿ ಮಾಡುತ್ತಿದ್ದರು. ಇವರ ಮನವಿಗೆ ಸ್ಪಂದಿಸಿ ಕೆಲವಡೆಗಳಲ್ಲಿ ಅಂಗಡಿಮುಂಗಟ್ಟುಗಳು ಬಳಿಕ ಮುಚ್ಚಲ್ಪಟ್ಟವು.

ಪಟ್ಟಣದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು  ಕಾರ್ಯಕರ್ತರು ರಸ್ತೆ ತಡೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಹಾಗೂ ತೈಲ ಬೆಲೆ ಏರಿಕೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಪಟ್ಟಣದದಾದ್ಯಂತ ಬಿಗು ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು. ಈ ಸಂಧರ್ಭದಲ್ಲಿ ಸೋಮಯಾಜಲಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ S H  ಮಂಜುನಾಥರೆಡ್ಡಿ, PLD ಬ್ಯಾಂಕ್ ಅಧ‍್ಯಕ್ಷರಾದ ದಿಂಬಾಲ್ ಅಶೋಕ್ ಹಾಗೂ ಕಾಂಗ್ರೇಸ್ ಮಖಂಡರಾದ ಸೀತಾರಾಮಿರೆಡ್ಡಿ, ಜೆ ಡಿ ಎಸ್ ಜಿಲ್ಲಾ ಪಂಚಾಯತಿ ಸದಸ್ಯ ಆರ್ ನಾರಾಯಣಸ್ವಾಮಿ, ಫೂಲ್ ಶಿವರೆಡ್ಡಿ, ಸಂತೋಷ ಕುಮಾರ್ ಇದ್ದರು.

ವರದಿ ಶಬ್ಬೀರ್ ಅಹಮದ್ ಶ್ರೀನಿವಾಸಪುರ

Read These Next

ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ನೇಮಕ

ಕೋಲಾರ: ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳನ್ನು ...

ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ...

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ,ಉಪಾಧ್ಯರಾಗಿ ಮಂಜುನಾಥ ಆರಾಧ್ಯ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ...

ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ

ವಿಶ್ವಾಸಮತ ಯಾಚನೆಗೆ ವಿಪರೀತ ಅಡ್ಡಿಯಾದ ವಿಪ್​ ವಿಚಾರ; ಗದ್ದಲದ ನಡುವೆ ನಾಳೆಗೆ ಉಭಯ ಸದನಗಳ ಕಲಾಪ ಮುಂದೂಡಿಕೆ