ಭಟ್ಕಳ ತಾಲೂಕು ಅಂಗನವಾಡಿ ನೌಕರರ ಸಮ್ಮೇಳನಕ್ಕೆ  ಯಮುನಾ ಗಾಂವ್ಕರ್ ಚಾಲನೆ

Source: S O News Service | By Staff Correspondent | Published on 15th December 2018, 7:44 PM | Coastal News | Don't Miss |

ಭಟ್ಕಳ: ಅಂಗನವಾಡಿ ಕಾರ್ಯಕರ್ತರು ಎಲ್ಲಾ ಸಮುದಾಯದ ಸೇವೆಗೆ ಅಗತ್ಯವಿದ್ದು, ಆದರೆ ಅವರ ಅಗತ್ಯತೆ ಈಡೇರಿಕೆಗೆ ಸರಕಾರಗಳು ಗಮನ ಹರಿಸದಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಸಿ.ಪಿ.ಐ.ಎಂ. ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವ್ಕರ್ ಅಭಿಪ್ರಾಯಪಟ್ಟರು.

ಅವರು ಶನಿವಾರ ಇಲ್ಲಿನ ಅರ್ಬನ ಕೋ-ಆಪರೇಟಿವ ಬ್ಯಾಂಕ್ ಸಭಾಗೃಹದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದ ತಾಲೂಕಾ ಘಟಕದ 8ನೇ ಸಮ್ಮೇಳನವನ್ನು ಕೆಂಪು ಬಾವುಟ ಹಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.  

‘ಸಮುದಾಯದ ಆರೋಗ್ಯ, ಶಿಕ್ಷಣ, ಆಹಾರಕ್ಕಾಗಿ ಯೋಜನೆಗಳು ಅವಶ್ಯಕತೆ ಇದೆ ಆದರೆ ಅದರ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತರು ಸಹ ಉಳಿಯಬೇಕೆಂಬ ಬಗ್ಗೆ ಸರಕಾರವೂ ಕಾರ್ಯ ಮಾಡುತ್ತಿಲ್ಲ. ಅಂಗನವಾಡಿಯನ್ನು ಸರಕಾರವೂ ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಿವೆ. ರೈತನಿಗೆ ಬೆಂಬಲ ಬೆಲೆಯಿಲ್ಲದೇ ಸಾಯುತ್ತಿದ್ದಾನೆ. ಕೂಲಿ ಕಾರ್ಮಿಕರು ಕೆಲಸವಿಲ್ಲದೇ ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ. ಕೆಲವು ಪಟ್ಟಬದ್ದಾಹಿತಾಸಕ್ತಿಗಳು ರಾಜಕೀಯ ಪಕ್ಷಗಳು ಅಂಗನವಾಡಿ ಕಾರ್ಯಕರ್ತರ ಉಗ್ರ ಹೋರಾಟದ ಸಮಯದಲ್ಲಿಯೇ ತಮ್ಮ ಸ್ವ-ಪ್ರಚಾರಕ್ಕೆಂದೆ ಕಾರ್ಯಕರ್ತರ ಹೋರಾಟವನ್ನು ಮರೆಸುವಂತೆ ಮಾಡುತ್ತಾರೆ ಎಂದರು. 
ಸದ್ಯ ಅಯೋಧ್ಯೆಯಲ್ಲಿ ಹಿಂದುಗಳು ರಾಮಮಂದಿರ ನಿರ್ಮಾಣದ ವಿಷಯವೂ ಭಾರಿ ಚರ್ಚೆಯಾಗುತ್ತಿದ್ದು, ಅಂಗನವಾಡಿ ಕಾರ್ಯಕರ್ತರ ಬೇಡಿಕೆಗೆ ಯಾವುದೇ ಬೆಲೆ ಇಲ್ಲವಾಗಿದಂತಹ ಸ್ಥಿತಿ ನಿರ್ಮಿಸಿದೆ ಎಂದ ಅವರು ಕೇಂದ್ರ ಸರಕಾರವೂ ಕೆಲ ತಿಂಗಳ ಹಿಂದೆ ಅಂಗನವಾಡಿ ಕಾರ್ಯಕರ್ತರ ವೇತನದಲ್ಲಿ 1500 ಹೆಚ್ಚಳ ಮಾಡಿದ್ದು ಆ ಏರಿಕೆಯಲ್ಲಿ ಅವರು ಹೇಗೆ ಜೀವನ ಮಾಡಬೇಕು, ಸಮಾಜದಲ್ಲಿ ನೆಮ್ಮದಿಯಿರಬೇಕಾದರೆ ದುಡಿಯುವ ಕೈಗಳಿಗೆ ಸಂತಸ ನೀಡಿ ತೃಪ್ತಿ ಸಿಗುವಂತೆ ಮಾಡಬೇಕು, ದುಡಿಮೆಗೆ ತಕ್ಕ ಕೂಲಿ ಸಿಗಬೇಕು. ದೇಶದಲ್ಲಿ ದೊಡ್ಡ ಹಗರಣಗಳು ರಾಜಾರೋಷವಾಗಿ ನಡೆಯುತ್ತಿದ್ದು, ಚಿಕ್ಕ ಪುಟ್ಟ ಕೆಲಸ ಮಾಡುವ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತರನ್ನು ಕಾರ್ಮಿಕರು ಎಂದು ಪರಿಗಣಿಸಬೇಕೆಂಬುದು ಒತ್ತಾಯ ನಮ್ಮದಾಗಿದೆ ಎಂದು ಹೇಳಿದರು.

ಜನವರಿ 8 ಮತ್ತು 9ರಂದು ದೇಶಾದ್ಯಂತ ಎಲ್ಲಾ ಕೂಲಿ ಕಾರ್ಮಿಕರು, ರೈತರು, ಅಂಗನವಾಡಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಯಲಿದ್ದು, ಜಿಲ್ಲೆ ಹಾಗೂ ತಾಲೂಕಾ ಘಟಕದಿಂದಲೂ ಪ್ರತಿಭಟನೆ ನಡೆಸಲಾಗುವದು ಎಂದು ಸಿ.ಪಿ.ಐ.ಎಂ. ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವ್ಕರ್ ತಿಳಿಸಿದರು.

ಇದೇ ವೇಳೆ ತಾಲೂಕಾ ಘಟಕದ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಯಿತು. ಈ ಸಂಧರ್ಭದಲ್ಲಿ ತಾಲೂಕಾ ಘಟಕದ ಅಧ್ಯಕ್ಷೆ ಪುಷ್ಪಾವತಿ ನಾಯ್ಕ, ಉಪಾಧ್ಯಕ್ಷೆ ಪದ್ಮಾವತಿ ನಾಯ್ಕ ಹಾಗೂ ಶಾಂತಿ ಮೋಗೇರ, ಕಾರ್ಯದರ್ಶಿ ಸುಧಾ ಭಟ್ಟ, ಸಹ ಕಾರ್ಯದರ್ಶಿ ಶಾಂತಿ ನಾಯ್ಕ, ಖಚಾಂಚಿ ಕವಿತಾ ನಾಯ್ಕ, ಸಂಘದ ಎಲ್ಲಾ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...