೬೮ ನೇ ಗಣರಾಜ್ಯೊತ್ಸವ : ಯಾವ ಭಾರತೀಯ ಪ್ರಜೆಗೇ ?

Source: S O News service | By sub editor | Published on 24th January 2017, 5:47 PM | Coastal News | Special Report | Public Voice |

 

ಪ್ರಜಾರಾಜ್ಯವೆಂದರೆ ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ, ಪ್ರಜೆಗಳಿಂದಲೇ ನಡೆಯುವ ಸಾಮ್ರಾಜ್ಯ. ಇಲ್ಲಿ ಪ್ರಜೆಗಳೇ ಪ್ರಭುಗಳು ತಮಗೆ ಎಂಥ ಆಡಳಿತ ಬೇಕೋ ಅಂಥದನ್ನು ಆರಿಸುವ ಸ್ವಾತಂತ್ರ್ಯ ಪ್ರಜೆಗಳಿಗಿದೆ. ತಮಗೆ ಸರಿಕಂಡ ಪ್ರಜಾಪ್ರತಿನಿಧಿಯನ್ನು ಆರಿಸಿ ಕಳಿಸುವುದೇನೋ ಸರಿ.

ಆದರೆ ಪ್ರಜೆಗಳಿಂದಲೇ ಆಯ್ಕೆಯಾದ ಆ ಪ್ರಜಾಪ್ರತಿನಿಧಿ ಎಷ್ಟರಮಟ್ಟಿಗೆ ಪ್ರಮಾಣಿಕವಾಗಿ ಆಡಳಿತ ನೀಡುತ್ತಾರೆ ಎಂಬುದು ಈಗ ಯಕ್ಷ ಪ್ರಶ್ನೆಯಾಗಿದೆ. ಎಲ್ಲೆಡೆ ತಾಂಡವಾಡುತ್ತಿರುವ ಭ್ರಷ್ಟಾಚಾರ, ಅನೈತಿಕತೆ, ದೇಶದ್ರೋಹಿತನ, ಭಯೋತ್ಪಾದನೆ, ನಮ್ಮನ್ನು ರಕ್ಷಿಸುವ ಪೊಲೀಸರೆ ಸರಣಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ನಮ್ಮ ದೇಶದ ಬೆನ್ನೆಲುಬಾಗಿ ನಿಂತ ಅನ್ನದಾತ ರೈತರು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜೀವವನ್ನು ಮುಡಿಪಾಗಿಟ್ಟು ರಾಷ್ಟ್ರದ ಗಡಿ ರಕ್ಷಣೆ ಮಾಡುವ ಯೋದನಿಗೆ ಸರಿಯಧ ಆಹಾರವಿಲ್ಲ. ಹಾಗಾದರೆ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ  ಮಂತ್ರ “ಜೈ ಜವಾನ್ ಜೈ ಕಿಸಾನ್” ಯಲ್ಲಿ ಹೋಯಿತು. ಮಹಿಳೆಯರು ಚಿಕ್ಕಮ್ಮಕ್ಕಳು, ವೃದ್ದೆಯ ಮೇಲೆ ಅತ್ಯಾಚಾರ ಮುಂತಾದ ಸಮಾಜ ಘಾತಕ ಚಟುವಟಿಕೆಗಳು ಇಡೀ ದೇಶವನ್ನೇ ಅಲ್ಲೋಲ ಕಲ್ಲೋಲಗೊಳಿಸಿದೆ. ನಮ್ಮ ರಾಜ್ಯದ ಲೋಕಾಯುಕ್ತ ಸಂಸ್ಥೆಯ ಮುಖ್ಯಸ್ಥರೆ ಲಂಚಕೋರರಾಗಿದ್ದಾರೆ. “ಬೇಲಿ ಯದ್ದು ಹೊಲ ಮೆದಂತೆ. ಇದನ್ನೆಲ್ಲ ನೋಡಿದರೆ ನಿಜಕ್ಕೂ ಇದು ಪ್ರಜಾರಾಜ್ಯ ವೇ ಎಂಬ ಅನುಮಾನ ಮೂಡುವುದು ಸಹಜ ಗಾಂಧೀಜಿಯವರ ಕನಸ್ಸಿನ  ‘ರಾಮ’ ರಾಜ್ಯ ನನಸಾಗದೇ ಸಾಮ್ರಾಜ್ಯ ಶಾಹಿ, ಸರ್ವಾಧಿಕಾರಿ ರಾಜಕಾರಣಿಗಳ ರಾಷ್ಟ್ರವಾಗುವತ್ತ ನಡೆದಿರುವುದು ನಿಜಕ್ಕೂ ಆತಂಕದ ಬೆಳವಣಿಗೆ.

    ನಮ್ಮ ಭಾರತ ದೇಶವು ೧೯೪೭ ಅಗಸ್ಟ್ ೧೫ ರಂದು ಸ್ವತಂತ್ರವಾಯಿತು. ತದನಂತರ ನವೆಂಬರ್ ೨೬, ೧೯೪೭ ರಲ್ಲಿ ತನ್ನ ಸಂವಿಧಾನವನ್ನು ರೂಢಿಸಿಕೊಂಡು ಗಣರಾಜ್ಯ ವ್ಯವಸ್ಥೆಗೊಳಗಾಯಿತು. ಗಣರಾಜ್ಯವೆಂದರೆ ಕೇವಲ ಪ್ರಜಾಪ್ರಭುತ್ವವಲ್ಲ. ಬದಲಾಗಿ ಯಾವ ರಾಷ್ಟ್ರದ ಮುಖ್ಯಸ್ಥರು ದೇಶದ ಜನರಿಂದ ಪರೋಕ್ಷವಾಗಿ ಇಲ್ಲವೆ ಅಪರೋಕ್ಷವಾಗಿ ಆಯ್ಕೆಯಾಗುತ್ತಾರೋ ಅದು ಗಣರಾಜ್ಯ. ಭಾರತವು ಬಗೆಬಗೆಯ ಆಡಳಿತ ವೈಖರಿಯನ್ನು ಕಂಡಿದೆ.
    ಪ್ರಪಂಚದ ಬಹುತೇಕ ಪ್ರಜಾಪ್ರಭುತ್ವ ರಾಷ್ಟ್ರಗಳು ಗಣರಾಜ್ಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆಯಾದರು ಅವುಗಳಲ್ಲಿ ಒಂದೇರೂಪ ಇಲ್ಲ. ಅಮೇರಿಕಾದ ಅಧ್ಯಕ್ಷರಿಗೆ ಅತಿಯಾದ ಅಧಿಕಾರ ಇದೆ. ಶ್ರೀಂಕಾದಲ್ಲಿ ಮಧ್ಯಮ ಪ್ರಮಾಣದ ಅಧಿಕಾರ ನೀಡಲಾಗಿದೆ. ಆದರೆ ಭಾರತದಲ್ಲಿ ರಾಷ್ಟ್ರಪತಿಯವರಿಗೆ ಯಾವುದೇ ಮಹತ್ವದ ಅಧಿಕಾರವಿಲ್ಲದಿದ್ದರೂ ಅವರು ನಮ್ಮ ಗಣರಾಜ್ಯದ ಮುಖ್ಯಸ್ಥರಾಗಿದ್ದಾರೆ.

    ರಾಷ್ಟ್ರಪತಿಯವರ ಕರ್ತವ್ಯಗಳು, ಅದಿವೇಶನ ಕರೆಯುವದು, ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ, ಸಂಸತ್ತಿನ ಸದಸ್ಯರಿಗೆ ಪ್ರಮಾಣವಚನ ಬೋದಿಸುವ ಅಧಿಕಾರ, ಮುಂಗಡಪತ್ರ ಮಂಡಿಸುವ ಅಧಿಕಾರ, ಲೋಕಸಭೆ ಹಾಗೂ ರಾಜ್ಯ ಸಭೆಗೆ ಸದಸ್ಯರನ್ನು ನೇಮಿಸಿ ಅಧೀಕಾರಿವನ್ನು, ಸುಗ್ರಿವಾಜ್ಞೆ ಹೊರಡಿಸುವ ಅಧಿಕಾರವನ್ನು ಹೊಂದಿದ್ದಾರೆ. ಆದರೆ ಅಧಿಕಾರಗಳನ್ನು ಬಳಸುವಾಗ ಅವರು ಪ್ರಧಾನಮಂತ್ರಿಯ ಸಲಹೆಯಂತೆ ನಡೆದುಕೊಳ್ಳುತ್ತಾರೆ ಎಂಬುದು ಮಹತ್ವದ ವಿಷಯವಾಗಿದೆ. ಈ ವಿಷಯಗಳಲ್ಲಿ ಅವರು ನಾಮಮಾತ್ರ ವ್ಯಕ್ತಿಯಾಗಿದ್ದಾರೆ.
    ನಮ್ಮ ದೇಶವನ್ನು “ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯ” ಎಂದು ಕರೆಯಲಾಗಿತ್ತು. ಆದರೆ ೧೯೭೬ ರಲ್ಲಿ ೪೨ನೇ ತಿದ್ದುಪಡಿ ಮೂಲಕ ಭಾರತವನ್ನು “ಸರ್ವಭೌಮ, ಸಮಾಜವಾದಿ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಗಣರಾಜ್ಯ” ಎಂದು ಕರೆಯಲಾಯಿತು. ೧೯೯೧ ರಲ್ಲಿ ಜಾರಿಗೆ ಬಂದದ್ದು ಹೊಸ ಆರ್ಥಿಕ ನೀತಿಯ ಘೋಷಣೆಯಿಂದ. ಜಾಗತೀಕರಣ ಉದಾರೀಕರಣ, ಖಾಸಗೀಕರಣ ಮುಂತಾದ ಕಾರಣಗಳಿಂದ ತನ್ನ ಮೌಲ್ಯವನ್ನು ಕಳೆದುಕೊಂಡಿದೆ.
    ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಒಂದು ಮೊತ್ತೊಂದರ ಮೇಲೆ ಸವಾರಿ ಮಾಡದಂತೆ, ಒಬ್ಬರು ಇನ್ನೊಬ್ಬರನ್ನು ಸರಳವಾಗಿ ಕಿತ್ತೊಗೆಯದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರಿಂದ ಭಾರತದಲ್ಲಿ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗಿ ಮುಂದುವರೆದಿದೆ. ಇದಕ್ಕೆ ಮುಖ್ಯ ಕಾರಣ ಭಾರತ ಒಂದು ಗಣರಾಜ್ಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವುದು.

    ಜನೆವರಿ ೨೬, ೨೦೧೭ ರ ಗಣರಾಜ್ಯೋತ್ಸವ ಎಲ್ಲರಿಗೂ ಹರುಷ ತರಲಿ. ಗಣರಾಜ್ಯ ಉಳಿಯಲಿ, ಬೆಳೆಯಲಿ, ಎಲ್ಲರೂ ದೇಶದ ಸಮಗ್ರ ಬೆಳವಣಿಗೆಗೆ ಒಗ್ಗಟ್ಟಿನಿಂದ ದುಡಿಯೋಣ. ಅಂದಾಗ ಮಾತ್ರ ಗಣರಾಜ್ಯೋತ್ಸವದ ಆಚರಣೆಗೆ ಒಂದು ಅರ್ಥ ಬರಬಹುದು.


ಜಗದೀಶ ವಡ್ಡಿನ
ಗ್ರಂಥಪಾಲಕರು
ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
ಬಾಡ, ಕಾರವಾರ
ಮೊ : ೯೬೩೨೩೩೨೧೮೫

Read These Next

ಗೊಂದಲಗಳ ನಡುವೆ ಮುಂದೂಡಲ್ಪಟ್ಟ ಪುರಸಭೆ ವ್ಯಾಪ್ತಿಯ ವಿವಿಧ ಮಾರುಕಟ್ಟೆಗಳ ಹರಾಜು ಪ್ರಕ್ರಿಯೆ

ಭಟ್ಕಳ: ಇಲ್ಲಿನ ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದಿಕ್ ಮಟ್ಟಾ ರವರ ಅಧ್ಯಕ್ಷತೆಯಲ್ಲಿ ಪುರಸಭೆ ವ್ಯಾಪ್ತಿಯ ವಿವಿಧ ಮಾರ್ಕೇಟಗಳ ಹರಾಜು ...

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದಾಗಿ ಭಟ್ಕಳದಿಂದ ಕಾಲು ಕೀಳಲು ಸಿದ್ಧವಾಗಿರುವ ದೂರದರ್ಶನ ಕೇಂದ್ರ..?

ಭಟ್ಕಳ: ಪ್ರಸಕ್ತ ಕಾಲಘಟ್ಟದಲ್ಲಿ ಭಟ್ಕಳ ಎಂಬ ಪುಟ್ಟ ಊರು ಬೆಳೆದು ನಿಂತಿದೆ. ಅಂತರಾಷ್ಟ್ರೀಯ ಆವಿಷ್ಕಾರಗಳನ್ನು ಕಾಣುವ ತವಕ ...

ಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರಉತ್ತರಪ್ರದೇಶದಲ್ಲಿ ವಿರೋಧ ಪಕ್ಷಗಳ ಚುನಾವಣಾ ರಣತಂತ್ರ

ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಬೆಳವಣಿಗೆಗಳು ಕೇಂದ್ರದಲ್ಲಿ ಹಾಲೀ ಅಧಿಕಾರದಲ್ಲಿರುವ ಪಕ್ಷದ ಆಳ್ವಿಕೆಯ ವಿರುದ್ಧ ...

ಹವಾಮಾನ ಬದಲಾವಣೆ ಮತ್ತು ಬಡವರು

ಹವಾಮಾನ ಬದಲಾವಣೆಯು ಒಂದು ತುರ್ತುಸ್ಥಿತಿಯನ್ನೇ ಸೃಷ್ಟಿಸಿದ್ದು ಈ ಭೂಮಿಗೆ ಮತ್ತು ಇದರ ಮೇಲೆ ವಾಸಿಸುತ್ತಿರುವ ಮಾನವ, ಸಸ್ಯ ಮತ್ತು ...

ಸಾವಿನ ಕೂಪ ದ ಲ್ಲಿ ಗಣಿಗಾರಿಕೆ

ಮೇಘಾಲಯದಲ್ಲಿ ಇತ್ತೀಚೆಗೆ ಸಂಭವಿಸಿದ ಗಣಿಕಾರ್ಮಿಕರ ಸಾವುಗಳು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಘೋಷಣೆಯ ಪ್ರತಿಪಾದಕರಿಗೆ ನಾಚಿಕೆ ...

 ಟಿಪ್ಪೂ,ಇಕ್ಬಾಲ್,ಆಝಾದ್; ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇರುವ ತ್ರೀರತ್ನಗಳು

ನ,೯,೧೦,೧೧ ಈ ಮೂರು ದಿನಗಳು ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇವರು ತ್ರೀರತ್ನಗಳಾದ ಮೈಸೂರು ಹುಲಿ ಟಿಪ್ಪೂ ಸುಲ್ತಾನ್,”ಸಾರೆ ಜಹಾಂ ಸೆ ...

ಎರಡು ತಿಂಗಳಾದರೂ ವಿದ್ಯಾರ್ಥಿಗಳ ಕೈ ಸೇರದ ಪಠ್ಯಪುಸ್ತಕ; ವಿದ್ಯಾರ್ಥಿ ಪಾಲಕರಲ್ಲಿ ಆತಂಕ

ಭಟ್ಕಳ: ಶಾಲೆಗಳು ಆರಂಭವಾಗಿ ಎರಡು ತಿಂಗಳು ಕಳೆದರೂ ಇದುವರೆಗೂ ರಾಜ್ಯದ 559 ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಉರ್ದು ಮಾಧ್ಯಮ ...