ಕೇಸರಿ ಶಾಲು ಧರಿಸದ ವಿದ್ಯಾರ್ಥಿಯ ಮೇಲೆ ಹಲ್ಲೆ; ನಾಲ್ವರ ವಿರುದ್ಧ ಪ್ರಕರಣ ದಾಖಲು

Source: S O News service | By sub editor | Published on 1st March 2017, 11:28 PM | Coastal News | State News | Incidents | Don't Miss |

ಭಟ್ಕಳ: ಇಲ್ಲಿನ ರಂಗೀಕಟ್ಟೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಎರಡು ಮೂರು ವಾರಗಳಿಂದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತಿದ್ದು ಬುಧವಾರ ಕೇಸರಿಶಾಲು ಧರಿಸದೆ ಕಾಲೇಜಿಗೆ ಬಂದ ವಿದ್ಯಾರ್ಥಿಯೊಬ್ಬನ ಮೇಲೆ ನಾಲ್ವರು ಕೇಸರಿಶಾಲುಧಾರಿ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದು ಪ್ರಕರಣ ಪೊಲೀಸ್ ಮೆಟ್ಟಲೇರಿದೆ.
ನಾಲ್ವರು ಮುಸ್ಲಿಮ್ ಅತಿಥಿ ಉಪನ್ಯಾಸಕೀಯರು ಬುರ್ಖಾ ಧರಿಸಿ ಕಾಲೇಜಿಗೆ ಬರುತ್ತಿರುವುದನ್ನು ವಿರೋಧಿಸುತ್ತ ಬಂದಿರುವ ಸಂಘಪರಿವಾರ ಬೆಂಬಲಿತ ವಿದ್ಯಾರ್ಥಿಗಳು ಹಾಗೂ ಕೆಲ ಉಪನ್ಯಾಸಕರು ಸಂಸದ ಅನಂತಕುಮಾರ್ ಹೆಗಡೆಯ ಪ್ರಚೋದಿತ ಹೇಳಿಕೆಗಳಿಂದ ಪ್ರೇರಣೆ ಪಡೆದು ಕಳೆದ ಎರಡು ಮೂರು ವಾರಗಳಿಂದ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತಿದ್ದರು. ಈ ಮಧ್ಯೆ ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆ ಮತ್ತು ನಾಮಧಾರಿ ಸಮಾಜದ ಮುಖಂಡರು ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿ ಮನವೊಲಿಸುವ ಪ್ರಯತ್ನಪಟ್ಟರೂ ಯಾರ ಮಾತಿಗೂ ಜಗ್ಗದ ವಿದ್ಯಾರ್ಥಿಗಳು ಮುಸ್ಲಿಮ್ ಉಪನ್ಯಾಸಕೀಯರು ಕಾಲೇಜಿಗೆ ಬುರ್ಖಾ ತೆಗೆದು ಬರುವವರೆಗೂ ತಾವು ಕೇಸರಿ ಶಾಲು ಧರಿಸುವುದನ್ನು ನಿಲ್ಲಿಸುವುದಿಲ್ಲ ಎಂದು ತಗಾದೆ ತೆಗೆದಿದ್ದರು. ಈ ಕುರಿತು ಕಾಲೇಜು ವಸ್ತ್ರ ಸಂಹಿತೆಯಲ್ಲಿ ಇಂತಹದ್ದೆ ವಸ್ತ್ರಗಳನ್ನು ಉಡಬೇಕು ಎಂಬ ನಿಯಮ ಇರದ ಕಾರಣ ಸಹಾಯಕ ಆಯುಕ್ತ ಎಂ.ಎನ್. ಮಂಜುನಾಥ್ ಅವರವ ಇಷ್ಟದ ಪ್ರಕಾರ ವಸ್ತ್ರಗಳನ್ನು ಉಡಬಹುದು ಎಂದು ತಿಳಿಸಿದ್ದರು. ಆದರೆ ಯಾವುದೇ ಕಾರಣಕ್ಕೂ ಶಾಂತತ ಭಂಗಕ್ಕೆ ಪ್ರಯತ್ನಪಟ್ಟರು ಪರಿಣಾಮ ನೆಟ್ಟಗಿರುವುದಿಲ್ಲ ಎಂಬ ಎಚ್ಚರಿಕೆಯ ಮಾತುಗಳನ್ನು ಆಡಿದ್ದರು. 
ಆದರೆ ಬುಧವಾರ ಪ್ರಕರಣ ಬೇರೆ ಹಾದಿ ಹಿಡಿದಿದ್ದು ಕೇಸರಿ ಶಾಲು ಧರಿಸಲು ಒಪ್ಪದ ವಿದ್ಯಾರ್ಥಿಗಳಿಗೂ ಬಲವಂತವಾಗಿ ಕೇಸರಿ ಶಾಲು ಹಾಕುವಂತೆ ಎಚ್ಚರಿಕೆ ನೀಡಿದ್ದು ಕೇಸರಿ ಶಾಲು ಧರಿಸದೆ ಕಾಲೇಜಿಗೆ ಬಂದ ಬಿ.ಎ. ನಾಲ್ಕನೇ ಸೆಮಿಷ್ಟರ್ ನಲ್ಲಿ ಓದುತ್ತಿರುವ ಜಯಂತ್ ನಾಯ್ಕ್ ಎಂಬಾತನ ಮೇಲೆ ಅದೇ ಕಾಲೇಜಿನ ವಿದ್ಯಾರ್ಥಿಗಳಾದ ರಾಘವೇಂದ್ರ, ಜೀವನ್, ಸಂದೀಪ್ ಹಾಗೂ ಅಭಿಷೇಕ್ ಎಂಬುವವರ ಹಲ್ಲೆ ಮಾಡಿದ್ದು ಈಗ ಪ್ರಕರಣ ಪೊಲೀಸ್ ಬಳಿ ಬಂದಿದೆ. ನಾಲ್ವರ ವಿರುದ್ಧ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮುಸ್ಲಿಮ್ ಮಹಿಳೆಯರ ವಸ್ತ್ರ ಸಂಹಿತೆಯಾಗಿರುವ ಬುರ್ಖಾದ ವಿರುದ್ಧ ಸರ್ಕಾರಿ ಶಿಕ್ಷಣ ಸಂಸ್ಥೆಯನ್ನು ಕೇಸರಿಕರಣದ ರಾಜಕೀಯ ಮಾಡುತ್ತಿರುವ ಸಂಘಿ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಯಾವ ಕಠಿಣಕ್ರಮ ಜರುಗಿಸುತ್ತಾರೆಂಬುದು ಕಾದು ನೋಡಬೇಕಾಗಿದೆ. 
 

Read These Next

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...