ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ಇದ್ದು ಇಲ್ಲದಂತಾಗಿರುವ 108 ತುರ್ತು ಆರೋಗ್ಯ ಕವಚ (ಆಂಬ್ಯುಲೆನ್ಸ್)

Source: so news | By Manju Naik | Published on 19th June 2018, 8:13 PM | Coastal News | Special Report |

ಭಟ್ಕಳ:ವಿಶ್ವ ಪ್ರಸಿದ್ದವಾದ ಮುರ್ಡೇಶ್ವರಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆಕಸ್ಮಿಕವಾಗಿ ಅನಾಹುತಗಳೆನದರೂ ಸಂಭವಿಸಿದರೆ ತುರ್ತು ಚಿಕಿತ್ಸೆಗೆ ಒಯ್ಯಲು ಇಲ್ಲಿ 108 ಆರೋಗ್ಯ ಕವಚ  ಇದ್ದು ಇಲ್ಲದಂತಾಗಿರುವದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ
ಮುರ್ಡೇಶ್ವರಕ್ಕೆ  ಪೌರಾಣಿಕ ಹಿನ್ನಲೆ ಇದ್ದು ಶಿವನ ದರ್ಶನಕ್ಕೆ ಭಕ್ತರು ಮುಗಿಬೀಳುತ್ತಾರೆ. ನೈಸರ್ಗಿಕ ಸಮುದ್ರ ತಾಣ, ಸ್ಕೂಬಾ ಡೈವಿಂಗ್ ಹೀಗೆ ವಿವಿದ ರೀತಿಯಲ್ಲಿ ಮುದ ನೀಡುವ ಸಾಧನಗಳು ಪ್ರವಾಸಿಗರನ್ನು ತನತ್ತ ಸೆಳೆಯುತ್ತಿದೆ. ಆದರೆ ಇಲ್ಲಿ ಎನಾದರೂ ಅವಘಡ ಸಂಭವಿಸಿದರೆ ಮಾತ್ರ ಇಲ್ಲಿ ತುರ್ತು ಚಿಕಿತ್ಸೆಗೆ ಕರೆದೊಯ್ಯಲು ಅತಿ ಮುಖ್ಯವಾದ ಅಂಬ್ಯುಲೆನ್ಸ್ ಸೇವೆ ಇಲ್ಲ.ಈ ಹಿಂದೆ ಇಲ್ಲಿ 108 ಕಾರ್ಯನಿರ್ವಹಿಸುತ್ತಿತ್ತು. ಆದರೆ ಅದು ಬಂದ ಆಗಿ ತಿಂಗಳುಗಳೆ ಕಳೆದಿದೆ. ಪರವಾನಿಗೆ ಮುಗಿದಿದ್ದು ಅದನ್ನು ನವೀಕರಣ ಮಾಡಲು ಆರೋಗ್ಯ ಇಲಾಖೆ ಮೀನಮೇಷ ಎಣಿಸುತ್ತಿದೆ. ಇದರಿಂದ ಮುರ್ಡೇಶ್ವರದ ಜನತೆ ಮಾತ್ರವಲ್ಲದೆ ಪ್ರವಾಸಿಗರು ತೊಂದರೆ ಅನುಭವಿಸುವಂತಾಗಿದೆ. 
ಅಕಸ್ಮಾತ ಆಗಿ ಪ್ರವಾಸಿಗರು ನೀರಿನಲ್ಲಿ ಮುಳುಗಿ ಅಸ್ವಸ್ಥರಾದರೆ, ಅನಾಹುತ, ಅವಘಡಗಳೆನಾದರೂ  ಸಂಭಿವಿಸಿದರೆ ತುರ್ತು ಚಿಕಿತ್ಸೆಗೆಂದು ತಾಲೂಕಾಸ್ಪತ್ರೆಗಾಗಲಿ, ಕುಂದಾಪುರ ಉಡುಪಿ ಸಾಗಿಸಲು ಇಲ್ಲಿ ಒಂದೆ ಒಂದು ಅಂಬ್ಯುಲೆನ್ಸ್ ಲಬ್ಯವಿಲ್ಲ. ಹೊನ್ನಾವರದ ಮಂಕಿಯಿಂದಲೊ ಅಥವಾ ಭಟ್ಕಳದಿಂದದಲೊ ಅಂಬ್ಯುಲೆನ್ಸ್ ತರಿಸಬೇಕು. ಅಷ್ಟರಲ್ಲಿ ರೋಗಿಗಳ ಪ್ರಾಣಕ್ಕೆ ಸಂಚಕಾರ ಬರುವ ಸಂದರ್ಬಗಳೆ ಹೆಚ್ಚಿವೆ.  ಸ್ಥಳೀಯ ಪಂಚಾಯಿತಿ ಆಗಲಿ, ತಾಲೂಕಾಡಳಿತವಾಗಲಿ ಈ ಕುರಿತು ಸೂಕ್ತ ಕ್ರಮಕ್ಕೆ ಮುಂದಾಗಿಲ್ಲದಿರುವದು ಸ್ಥಳೀಯರ ಅಸಮಾದಾನಕ್ಕೆ ಕಾರಣವಾಗಿದೆ.
ಈ ಬಗ್ಗೆ ಸ್ಥಳೀಯ ಶರತ್ ಭರತ ನಾಯ್ಕ, ಮಾತನಾಡಿ
ಮುರ್ಡೇಶ್ವರರ ಸ್ಥಳೀಯ ತುರ್ತು ಪರಿಸ್ಥಿತಿಯಲ್ಲಿ ಜೀವ ಉಳಿಸಬೇಕಾದ 108 ಆರೋಗ್ಯ ಕವಚ ಅನಾರೋಗದಿಂದ ಬಳಲುತ್ತಿದೆ. ತುರ್ತು ಸಂದರ್ಬದಲ್ಲಿ ಕರೆ ಮಾಡಿದರೆದುರಸ್ತಿಯಲ್ಲಿದೆ ಎನ್ನುತ್ತಾರೆ. ಕಳೆದ ಒಂದು ತಿಂಗಳಿಂದಲೂ ಇದೆ ಕಥೆ ಹೇಳುತ್ತಿದ್ದಾರೆ. ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಸಂಪರ್ಕಿಸಿದರೂ ಪ್ರಯೋಜನವಾಗಿಲ್ಲ. ಶಾಸಕರಿಗೂ ಈ ಕುರಿತು ದೂರು ನೀಡಲಾದೆ. 108 ನಿರ್ವಹಣಾ ಸಂಸ್ಥೆ ಜಿವಿಕೆ ಇಎಮ್‍ಆರ್‍ಐ ಬಳಿಯಂತೂ ವಿಚಾರಿಸುವಂತಿಲ್ಲ. ಇದರಿಂದ ಸಾರ್ವಜನಿಕರು ಯಾತ್ರಾರ್ಥಿಗಳು ಸಂಕಷ್ಟ ಅನುಭವಿಸುವಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ಸಿದ್ದ ಕಾರವಾರ ಜಿಲ್ಲಾ ವೈದ್ಯಾಧಿಕಾರಿ,ಡಾ. ಅಶೋಕ ಕುಮಾರ 
ಮುರ್ಡೇಶ್ವರದಲ್ಲಿದ್ದ ಅಂಬ್ಯುಲೆನ್ಸ್ ಹಳೆದಾಗಿದ್ದು ಹೊಸ ಅಂಬ್ಯುಲೆನ್ಸ್ ಬೇಕೆಂದು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಮ್ಮ ಜಿಲ್ಲೆ ಗುಡ್ಡಗಾಡು ಪ್ರದೇಶಗಳಿಂದ ಕೂಡಿದ್ದು ಇಲ್ಲಿ ಖರೀದಿಸಿದ್ದ ಹೊಸ ಅಂಬ್ಯುಲೆನ್ಸಗಳನ್ನೆ ನೀಡುವಂತೆ ಒತ್ತಡ ಹೇರಲಾಗಿದೆ. ಮುಂದಿನ 15 ದಿನಗಳಲ್ಲಿ ಹೊಸ ಅಂಬ್ಯುಲೆನ್ಸ್ ಮುರ್ಡೇಶ್ವರಕ್ಕೆ ನೀಡಲಾಗುವದು. ಅಲ್ಲಿಯವರೆಗೂ ಬೆಳಗಿನ ಸಂದರ್ಬ ಮಂಕಿಯ ಅಂಬ್ಯುಲೆನ್ಸ್ ಕಳುಹಿಸಿವ ವ್ಯವಸ್ಥೆ ಮಾಡಲಾಗುವದು ಎಂದರು. 

Read These Next

ಪ್ರಜಾತಂತ್ರ ಮತ್ತು ವಿನಯ

ಆದರೆ ತಮ್ಮ ವಿರೋಧಿಗಳಲ್ಲಿ ಮಾತ್ರವಲ್ಲದೆ ಒಂದು ಸಭ್ಯ ಸಮಾಜವು ಪಸರಿಸಬೇಕೆಂಬ ಆಶಯವುಳ್ಳವರಲ್ಲೂ ಸಹ ಒಂದು ಬಗೆಯ ಹತಾಷ ಭಾವಗಳನ್ನು ...

ಗಡಿಯಾರ ವ್ಯಾಪಾರಿಯನ್ನು”ಭಯೋತ್ಪಾದಕ’ ಎಂದು ಬಿಂಬಿಸಿದ ಮಾಧ್ಯಮಗಳಿಗೆ ಛೀ,ಥೂ ಎನ್ನುತ್ತಿರುವ ಸಾರ್ವಜನಿಕರು

ಬೆಂಗಳೂರು: ಅಮಾಯಕ ಗಡಿಯಾರ ವ್ಯಾಪಾರಿಯೊಬ್ಬರನ್ನು ‘ಉಗ್ರ’ನೆಂದು ಬಿಂಬಿಸಿ ಕೆಲ ಸುದ್ದಿ ಚಾನೆಲ್ ಗಳು ಸುಳ್ಳು ವದಂತಿಗಳನ್ನು ...