ಅತಿವೇಗದ ಚಾಲನೆ; ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಟ್ರಕ್; ಓರ್ವ ಸ್ಥಳದಲ್ಲೆ ಸಾವು ಇಬ್ಬರು ಗಂಭೀರ 

Source: sonews | By Staff Correspondent | Published on 27th September 2017, 11:21 PM | Coastal News | Incidents | Don't Miss |

ಭಟ್ಕಳ: ಅತ್ಯಂತ ವೇಗದಿಂದ ಚಲಿಸುತ್ತಿದ್ದ ಬುಲೆರೂ ಮಿನಿ ಟ್ರಕ್ಕೊಂದು ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಯುವಕರು ಗಂಭೀರ ಗಾಯಗೊಂಡ ಘಟನೆ ಬುಧವಾರ ರಾತ್ರಿ ಬಂದರ್ ರಸ್ತೆಯ ಡೋಂಗರ್ ಪಳ್ಳಿ ಕ್ರಾಸ್‌ನಲ್ಲಿ ಜರಗಿದೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ತಲಗೋಡ್ ನಿವಾಸಿ ನಾಗಪ್ಪ ಈರಪ್ಪ ನಾಯ್ಕ(೪೫) ಎಂದು ಗುರುತಿಸಿದ್ದು, ಗಾಯಗೊಂಡವರನ್ನು ಮಗ್ದೂಮ್ ಕಾಲೋನಿಯ ಮರ್ವಾನ್ ಜಾಫ್ರಾನ್(೨೨) ಹಾಗೂ ಆಸಾರಕೇರಿ ನಿವಾಸಿ ಸವೂದ್ ಜಾಫರ್ ತಾಹಿರಾ(೨೨) ಎಂದು ಗುರುತಿಸಲಾಗಿದೆ. ಗಾಯಗೊಂಡ ಯುವಕರನ್ನು ಸ್ಥಳಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. 
ಘಟನೆ ವಿವರ: ಮೃತ ನಾಗಪ್ಪ ನಾಯ್ಕ ಎಂಬುವವರು ತಮ್ಮ ಕೆಲಸ ಮುಗಿಸಿಕೊಂಡು ಬಂದರ್ ಬಳಿಯ ತಮ್ಮ ನಿವಾಸ ತಲಗೋಡಕ್ಕೆ ಬೈಕ್ ನಲ್ಲಿ ಹೋಗುತ್ತಿರುವಾಗ ಬಂದರ್ ಕಡೆಯಿಂದ ಭಟ್ಕಳಕ್ಕೆ ಅತಿವೇಗದಿಂದ ಬಂದ ಬುಲೆರೂ ಮಿನಿ ಟ್ರಕ್ ಮೊದಲು ನಾಗಪ್ಪ ನಾಯ್ಕರ ಬೈಕ್ ಡಿಕ್ಕಿ ಹೊಡಿಯಿತು. ಪ್ರತ್ಯಕ್ಷದರ್ಶಿಗಳ ಪ್ರಕಾರ ಬುಲೆರೋ ಟ್ರಕ್ ಬೈಕನ್ನ ದೂರಕ್ಕೆ ಎಳೆದುಕೊಂಡು ಹೋಗಿ ನಂತರ ಡೋಂಗರ್ ಪಳ್ಳಿಯ ಕಡೆಗೆ ಹೋಗುತ್ತಿದ್ದ ಯುವಕರ ಮತ್ತೊಂದು ಬೈಕ್ ಗೆ ಡಿಕ್ಕಿ ಹೊಡೆಯಿತು. ಈ ಘಟನೆಯಲ್ಲಿ ನಾಗಪ್ಪ ನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದು ಯುವಕರು ಗಂಭೀರವಾಗಿ ಗಾಯಗೊಂಡರು. 
ಭಟ್ಕಳ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಪೊಲೀಸರು ತನಿಖೆ ಕೈಗೊಂಡಿದ್ದಾರೆ.
 

Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...

ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ವಿತರಣೆ ಮಾಡುವುದರಲ್ಲಿ ನಿರ್ಲಕ್ಷ್ಯ ವಹಿಸಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ-ಸ್ಪೀಕರ್ ರಮೇಶ್ ಕುಮಾರ್ ಎಚ್ಚರಿಕೆ

ರಾಜಿನಾಮೆಯಿಂದ ಉಂಟಾಗಿರುವ ಬಿಕ್ಕಟ್ಟಿನ ಬೆಳವಣಿಗೆಗಳ ಬಗ್ಗೆ ತೀವ್ರವಾಗಿ ತಲೆ ಕೆಡಿಸಿಕೊಂಡಿದ್ದ ಸ್ಪೀಕರ್ ರಮೇಶ್ ಕುಮಾರ್ ...