ಲ್ಯಾಪ್‍ಟಾಪ್ ಬದಲು ಸೆರಾಮಿಕ್ ಟೈಲ್ಸ್ ಇಟ್ಟು ವಂಚಿಸುತ್ತಿದ್ದ 6 ಜನ ಖದೀಮರ ಸೆರೆ

Source: S O News | By MV Bhatkal | Published on 26th December 2016, 2:49 PM | Don't Miss | National News |

ನವದೆಹಲಿ, ಡಿ.26- ಅದೇಶ್ ಕುಮಾರ್ (25), ಶೈಲೇಂದ್ರ ಕುಮಾರ್ (22), ಸುಬೋಧ್ ರಾಯ್ (34), ಮಿಥುನ್ ಕುಮಾರ್ (22), ಸನೋಜ್ ಕುಮಾರ್ (22) ಹಾಗೂ ಜಯೇಶ್ ಪಟೇಲ್ ಬಂಧಿತರು. ಆರೋಪಿಗಳಿಂದ ಸುಮಾರು 15 ಲಕ್ಷ ರೂ. ಮೌಲ್ಯದ 28 ಲ್ಯಾಪ್‍ಟಾಪ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿವಿಧೆಡೆ ಇವರು ಮಾರಾಟ ಮಾಡಿರುವ ಇನ್ನೂ ಅನೇಕ ಟ್ಯಾಪ್‍ಟಾಪ್‍ಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅವುಗಳನ್ನೂ ಜಪ್ತಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ.

ಸರಕು ಸಾಗಣೆ ಕಂಪನಿಯೊಂದರ ವ್ಯವಸ್ಥಾಪಕ ಸಂದೀಪ್ ಶರ್ಮ ಡಿ.18ರಂದು ಓಕ್ಲಾ ಇಂಡಸ್ಟ್ರಿಯಲ್ ಏರಿಯಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಗುರ್‍ಗಾಂವ್‍ನ ಗೋದಾಮಿಗೆ ರವಾನಿಸಲು ಓಕ್ಲಾದ ತಮ್ಮ ಉಗ್ರಾಣದಿಂದ ವಾಹನಕ್ಕೆ 140 ಲ್ಯಾಪ್‍ಟಾಪ್‍ಗಳನ್ನು ಭರ್ತಿ ಮಾಡಲಾಗಿತ್ತು. ನೌಕೆಯಿಂದ ರವಾನಿಸಲಾದ ಈ ಸರಕನ್ನು ತಪಾಸಣೆ ಮಾಡಿದಾಗ 38 ಲ್ಯಾಪ್‍ಟಾಪ್‍ಗಳು ಮತ್ತು ಅವುಗಳ ಚಾರ್ಜರ್‍ಗಳು ನಾಪತ್ತೆಯಾಗಿವೆ. ಆ ಜಾಗಗಳಲ್ಲಿ ಸೆರಾಮಿಕ್ ಟೈಲ್ಸ್‍ಗಳನ್ನು ಇಟ್ಟು ಲ್ಯಾಪಿಗಳನ್ನು ಕಳವು ಮಾಡಲಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದರು.

ಖದೀಮರ ಸೆರೆಗಾಗಿ ಕಾರ್ಯಾಚರಣೆ ನಡೆಸಿದ ಎಸಿಪಿ ಕಲ್ಕಾಜಿ ಅಮಿತ್ ಗೋಯಲ್ ನೇತೃತ್ವದ ತಂಡವು ಕಾರ್ಗೋ ಕಂಪನಿಯ ಉದ್ಯೋಗಿಗಳೇ ಇದರಲ್ಲಿ ಷಾಮೀಲಾಗಿದ್ದಾರೆ ಎಂಬ ಗುಮಾನಿ ಮೇಲೆ ಕೆಲವು ದಾಖಲೆಗಳನ್ನು ಪರಿಶೀಲಿಸಿದಾಗ ಅನುಮಾನದ ಮುಳ್ಳು ಟ್ರಕ್ ಚಾಲಕ ಆದೇಶ್ ಕುಮಾರ್‍ನತ್ತ ನೆಟ್ಟಿತು. ತೀವ್ರ ವಿಚಾರಣೆಗೆ ಒಳಪಡಿಸಿದಾಗ ಖದೀಮರ ಬಣ್ಣ ಬಯಲಾಯಿತು. ಇವರು ಮೊಹರಾದ ಬಾಕ್ಸ್‍ಗಳಿಂದ ಲ್ಯಾಪ್‍ಟಾಪ್‍ಗಳನ್ನು ಎಗರಿಸಿ ಅಷ್ಟೇ ತೂಕದ ಸೆರಾಮಿಕ್ ಟೈಲ್ಸ್‍ಗಳನ್ನು ಇಟ್ಟು ಮತ್ತೆ ಸೀಲ್ ಮಾಡಿದ್ದರು. ಇವರು ಕಳವು ಮಾಡಿದ ಲ್ಯಾಪಿಗಳನ್ನು ದೆಹಲಿಯ ಗಫರ್ ಮಾರ್ಕೆಟ್, ಪಾಲಿಕಾ, ನೆಹರು ಪ್ಲೇಸ್ ಮತ್ತು ಲಜ್‍ಪತ್ ನಗರ್ ಮೊದಲಾದ ಸ್ಥಳಗಳಲ್ಲಿ ಮಾರಾಟ ಮಾಡಿದ್ದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...