ಜೊಯಿಡಾದಲ್ಲಿರುವ ಬೆಳಗೆರೆ ಫಾರ್ಮ್ ಹೌಸ್‌ನಲ್ಲೂ ಸಿಸಿಬಿ ತೀವ್ರ ಪರಿಶೀಲನೆ

Source: S.O. News Service | By MV Bhatkal | Published on 9th December 2017, 5:46 PM | Coastal News | Don't Miss |

ಜೊಯಿಡಾ : ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸೂಪಾರಿ ನೀಡಿರುವ ಆರೋಪದಲ್ಲಿ ಬಂಧನವಾಗಿರುವ ಪತ್ರಕರ್ತ ರವಿ ಬೆಳಗೆರೆ ತನಿಖೆ ಚುರುಕಿನಿಂದ ನಡೆದಿದೆ. ರವಿ ಬೆಳಗೆರೆ ವಿರುದ್ಧದ ಕೇಸ್ ಬಲವಾಗಿದೆ : ಸಂಗ್ರಾಮ್ ಸಿಂಗ್ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ಸೂಪಾರಿ ನೀಡಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತಯೇ ಶುಕ್ರವಾರ ಸಂಜೆ ರವಿ ಬೆಳಗೆರೆ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿ, ಅವರ ಕಚೇರಿ, ಮನೆಯಲ್ಲಿ ತಪಾಸಣೆ ನಡೆಸಿದ್ದಾರೆ. ಇದೀಗ ಸಿಸಿಬಿ ಪೊಲೀಸರು  ಜೊಯಿಡಾದಲ್ಲಿರುವ ರವಿ ಬೆಳಗೆರೆ ಅವರ ಜಂಗಲ್ ಬೋಟ್ ಬರ್ಭುಜಾ ಫಾರ್ಮ್ ಹೌಸ್ ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಐದು ಜನರ ಪಿಎಸ್ ಐ ತಂಡವೊಂದು ಜೊಯಿಡಾದಲ್ಲಿರುವ ರವಿ ಬೆಳಗೆರೆ ಅವರ ಜಂಗಲ್ ಬೋಟ್ ಬರ್ಬೂಸಾ ಫಾರ್ಮ್ ಹೌಸ್ ಗೆ ತೆರಳಿದ್ದು, ಪರಿಶೀಲನೆ ಮಾಡುತ್ತಿದ್ದಾರೆ. ಪ್ರಮುಖ ಸಾಕ್ಷಿ, ರವಿ ಬೆಳಗೆರೆ ಎರಡನೇ ಹೆಂಡತಿ ನಾಪತ್ತೆ ರವಿ ಬೆಳಗೆರೆ ಅವರು ಜೊಯಿಡಾದಲ್ಲಿರುವ ತಮ್ಮ ಫಾರ್ಮ್ ಹೌಸ್ ಗೆ ತಿಂಗಳಿಗೊಮ್ಮೆ ಬಂದು ಹೋಗುತ್ತಿದ್ದರು ಎನ್ನಲಾಗಿದೆ. ಈಗಾಗಲೇ ಮನೆ ಮತ್ತು ಕಚೇರಿಗಳಲ್ಲಿ ಸಿಸಿಬಿ ಪೊಲೀಸರು ತಪಾಸಣೆ ನಡೆಸಿ ಒಂದು ರಿವಾಲ್ವರ್, 53 ಜೀವಂತ ಗುಂಡುಗಳು, ಒಂದು ಬಳಸಿರುವ ಗುಂಡು, ಚಿಂಕೆ ಚರ್ಮ, ಒಂದು ಡಬ್ಬಲ್ ಬ್ಯಾರೆಲ್ ಗನ್, ಒಂದು ದೊಡ್ಡ ಆಮೆ ಚಿಪ್ಪು ಪತ್ತೆಯಾಗಿತ್ತು. ನನ್ನ ತಂದೆ ನಿರಪರಾಧಿ: ಭಾವನಾ ಬೆಳಗೆರೆ ಇದೆಲ್ಲ ಸಿಕ್ಕಿದ್ದರಿಂದ ಮತ್ತಷ್ಟು ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಬೆಳೆಗೆರೆ ಫಾರ್ಮ್ ಹೌಸ್ ಅನ್ನು ಸಹ ಪರಿಶೀಲನೆ ನಡೆಸುತ್ತಿದ್ದಾರೆ.

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...